ಟಿಪು ್ಪ ಸಮುದಾಯ ಭವನಕ್ಕೆ ಚಿಂತನೆ
ಹಾನಗಲ್ಲ: ಟಿಪ್ಪು ಸುಲ್ತಾನ ಹೆಸರಿನ ಸಮುದಾಯ ಭವನವನ್ನು ಅಲ್ಪಸಂಖ್ಯಾತರ ನಿಗಮದಿಂದ ಹಾನಗಲ್ಲಿನಲ್ಲಿ ನಿರ್ಮಿಸಲು ಚಿಂತನೆ ನಡೆದಿದೆ ಎಂದು ಶಾಸಕ ಮನೋಹರ ತಹಶೀಲ್ದಾರ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ ಅಭಿಮಾನಿಗಳ ಮಹಾವೇದಿಕೆ ತಾಲೂಕು ಘಟಕದಿಂದ ನಡೆದ ತಾಲೂಕು ಮಟ್ಟದ ಹಜರತ್ ಟಿಪ್ಪುಸುಲ್ತಾನರ 263ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಟಿಪ್ಪುಸುಲ್ತಾನ ಅಪ್ರತಿಮ ದೇಶಭಕ್ತರಾಗಿದ್ದು, ಶೌರ್ಯ, ಸಾಹಸಗಳಿಂದ ಅಂದಿನ ಎಲ್ಲ ರಾಜರಿಗೆ ಸಿಂಹಸ್ವಪ್ನರಾಗಿದ್ದರು. ಅವರ ಜೀವನದ ಯಶೋಗಾಥೆ ಯುವಕರಿಗೆ ಮಾದರಿಯಾಗಿದೆ ಎಂದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇಶವನ್ನಾಳಿದ ಹಲವು ಮುಸ್ಲಿಂ ರಾಜರಲ್ಲಿ ಟಿಪ್ಪು ವಿಶಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರು. ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಂಡವರು. ಅವರ ಜನ್ಮದಿನಾಚರಣೆ ಇದುವರೆಗೂ ನಡೆಯದೆ ಇರುವುದು ವಿಷಾದದ ಸಂಗತಿ. ಹಾನಗಲ್ಲಿನಲ್ಲಿ ಅವರ ಅಭಿಮಾನಿಗಳು ನಡೆಸುತ್ತಿರುವ ಕಾರ್ಯಕ್ರಮವನ್ನು ಎಲ್ಲ ಸಮುದಾಯದವರೂ ಸೇರಿ ಆಚರಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬಿಜಕಲ್ಲಿನ ಶಿವಲಿಂಗ ಮಹಾಸ್ವಾಮಿಗಳು, ಸಮಾಜದ ಗುರುಗಳಾದ ಎಸ್.ಕೆ. ಪೀರಜಾದೆ, ಸೈಯದ ಸರ್ವರಪಾಷಾ ಪೀರಜಾದೆ ಸಾನ್ನಿಧ್ಯ ವಹಿಸಿದ್ದರು. ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆ ನಗರ ಘಟಕದ ಅಧ್ಯಕ್ಷ ಮಹ್ಮದ ಹನೀಫ್ ಹುಡೇದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ ಮುಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎಂ. ಮುಲ್ಲಾ, ಟಿಪ್ಪುಸುಲ್ತಾನ ನಾಯ್ಕವಾಡಿ, ಪುರಸಭೆ ಉಪಾಧ್ಯಕ್ಷ ಜಾಫರಸಾಬ ಕೇಣಿ, ಪಿಎಸ್ಐ ಮಹದೇವ ಯಲಿಗಾರ, ಗಣ್ಯರಾದ ಯಾಶೀರಖಾನ ಪಠಾಣ, ವಿಷ್ಣುಕಾಂತ ಜಾಧವ, ಸಿ.ಎಂ. ಮಲ್ಲಮ್ಮನವರ, ಫಯಾಜ ಅಹ್ಮದ ಮುಲ್ಲಾ, ಅಬ್ದುಲ್ ಮಜೀದ ಮಾಳಗಿಮನಿ, ಶೇರಅಲಿ ಮುಲ್ಲಾ, ಜಿ.ಎಂ. ಮುಲ್ಲಾ, ನಿಸಾರ ಪಾನವಾಲೆ, ಮುಸ್ತಾಕ ಸುತಾರ, ಹನೀಫ್ ಜಾಲೇಗಾರ, ಅಲ್ತಾಫ ಮುಕಾಶಿ, ರಬ್ಬಾನಿ ಮುಲ್ಲಾ, ಜಹೀರ ಶಿಡೇನೂರ, ಸಾಧಿಕ ನಾಯಕ, ಜಿಲಾನಿ ಪಾಳಾ, ಫಾರುಖ ಸುತಾರ, ಆಶಿಫ್ ಶಿಡೆನೂರ ಇದ್ದರು.
ಪಟ್ಟಣದ ಅಂಜುಮನ್ ಶಾಲಾ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಟಿಪ್ಪು ಭಾವಚಿತ್ರದ ಮೆರವಣಿಗೆ ತಾಲೂಕು ಕ್ರೀಡಾಂಗಣ ತಲುಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

